Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸಾಹಸದಲ್ಲಿ `ಬಾಯ್ಸ್`
Posted date: 10 Thu, Oct 2013 – 08:28:57 AM

ಶಂಕರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಂಕರ್‌ಗೌಡ ಹಾಗೂ ಸ್ಯಾಂಡಿ ಅವರು ನಿರ್ಮಿಸುತ್ತಿರುವ ‘ಬಾಯ್ಸ್  ಚಿತ್ರಕ್ಕೆ ಅಂಡರ್ ವಾಟರ್ ಫ಼ೈಟ್ ಸನ್ನಿವೇಶದ ಚಿತ್ರೀಕರಣ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರ ಸಾರಥ್ಯದಲ್ಲಿ ಸದಾಶಿವನಗರ ಈಜುಕೊಳದಲ್ಲಿ ನಡೆದಿದೆ. ರಾಣಿಪಾಟೀಲ್ ಹಾಗೂ ಡ್ಯಾನಿ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಎಂದು ಚಿತ್ರದ ನಿರ್ದೇಶಕರೂ ಆಗಿರುವ ತಿಳಿಸಿದ್ದಾರೆ.
   ಮಾಲಾಶ್ರೀ ಅವರು ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರವನ್ನು ಶಂಕರ್‌ಗೌಡ ಅವರೇ ನಿರ್ದೇಶಿಸುತ್ತಿದ್ದಾರೆ. ರವಿಶಂಕರ್, ತಬಲನಾಣಿ, ಶ್ರೀನಿವಾಸಮೂರ್ತಿ, ಅಖಿಲಾಕಿಶೋರ್, ಗ್ಯಾದಿ, ರಾಣಿಪಾಟೀಲ್, ಡ್ಯಾನಿ, ಮಂಜುನಾಥ್ ಪವಾರ್, ಮನೋಜ್, ರಾಜೀವ್, ಕಿಮಾಯಾ, ಕಾಜಲ್  ಮುಂತಾದವರು ತಾರಾಬಳಗದಲ್ಲಿದ್ದಾರೆ.
  ರಾಜೇಶ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಅರ್ಜುನ್‌ಜನ್ಯ ಸಂಗೀತ ನೀಡುತ್ತಿದ್ದಾರೆ. ಶ್ರೀ ಸಂಕಲನ, ಆನಂದ್ ಕಲಾನಿರ್ದೇಶನ, ಗಣೇಶ್, ತ್ರಿಭುವನ್ ನೃತ್ಯ ನಿರ್ದೇಶನ, ಥ್ರಿಲ್ಲರ್‌ಮಂಜು, ಪೀಟರ್ ಅವರ ಸಾಹಸ ನಿರ್ದೇಶನವಿರುವ ‘ಬಾಯ್ಸ್‘ ಚಿತ್ರಕ್ಕೆ ಶಕ್ತಿ ಸಂಭಾಷಣೆ ಬರೆದಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಾಹಸದಲ್ಲಿ `ಬಾಯ್ಸ್` - Chitratara.com
Copyright 2009 chitratara.com Reproduction is forbidden unless authorized. All rights reserved.